ಪ್ರೀತಿಯ ವಿಲನ್ ಶಿವಯೋಗಿ ಗುತ್ತೆಮ್ಮನವರ್
Posted date: 12 Tue, Mar 2024 12:39:31 PM
ಹಾಸನದಲ್ಲಿ ಯುವತಿಯೊಬ್ಬಳ ಜೀವನದಲ್ಲಿ ನಡೆದ ನೈಜ ಘಟನೆಯನ್ನಿಟ್ಟುಕೊಂಡು ನಿರ್ಮಾಣವಾದ ಚಿತ್ರ ಪ್ರೀತಿಯ ಹುಚ್ಚ. ಈ ಚಿತ್ರದ ಕಥೆಯಲ್ಲಿ ನಾಯಕ, ನಾಯಕಿಯಷ್ಟೇ ಪ್ರಮುಖವಾದ ಮತ್ತೊಂದು ಪಾತ್ರ ಎಂದರೆ ಖಳನಾಯಕನದು. ಈ ವಿಲನ್ ಕ್ಯಾರೆಕ್ಟರ್ ಎಟ್ರಿಯಾದ ಮೇಲೇ ನಾಯಕಿಯ ಜೀವನ ಅಲ್ಲೋಲ ಕಲ್ಲೋಲವಾಗುವುದು. ಯುವನಟ ಶಿವಯೋಗಿ ಸಿದ್ದಪ್ಪ ಗುತ್ತೆಮ್ಮನವರ್ ಈ ವಿಲನ್  ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರು  ಈ ಚಿತ್ರದ ಸಹನಿರ್ಮಾಪಕರೂ ಹೌದು. ಉತ್ತರ ಕರ್ನಾಟಕದ ಶಿಲ್ಪ ಕಲಾವಿದರ ಕುಟುಂಬದಿಂದ ಬಂದ ಶಿವಯೋಗಿ ಅವರು ಬೆಂಗಳೂರಿಗೆ ಬಂದ ಆರಂಭದ ದಿನಗಳಲ್ಲಿ ಐಟಿ ಕಂಪನಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದರು.
 
ತಂದೆ ಸಿದ್ದಪ್ಪ ಗುತ್ತೆಮ್ಮನವರ್ ಒಬ್ಬ ಶಿಲ್ಪ ಕಲಾವಿದರಾಗಿದ್ದು, ಚಿಕ್ಕ ವಯಸಿನಿಂದಲೇ ಕಲೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಬಂದ ಶಿವಯೋಗಿ ಅವರು ಆರಂಭದಲ್ಲಿ ಟಿಎನ್ ಸೀತಾರಾಂ ಅವರ ಮಗಳು ಜಾನಕಿ, ಶಾಂತಂ ಪಾಪಂ ಕಾವೇರಿ ಕನ್ನಡ ಮೀಡಿಯಂ ಹೀಗೆ ಹಲವು ಸೀರಿಯಲ್ ಗಳಲ್ಲಿ ಬಣ್ಣ ಹಚ್ಚಿದರು. ಇಂಟರ್ ವೆಲ್ ಎಂಬ  ಚಿತ್ರದಲ್ಲಿ ಅಭಿನಯಿಸುವ ಮೂಲಕ ಬೆಳ್ಳಿತೆರೆಗೂ ಎಂಟ್ರಿ ಕೊಟ್ಟರು. ಇದೀಗ ಪ್ರೀತಿಯ ಹುಚ್ಚ ಮೂಲಕ ಅಭಿನಯದ ಜೊತೆಗೆ ನಿರ್ಮಾಪಕನೂ ಆಗಿದ್ದಾರೆ. ಈ ಚಿತ್ರದಲ್ಲಿ ಊರ ಗೌಡನ ಮಗನಾಗಿ ವಿಲನ್ ಪಾತ್ರದಲ್ಲಿ ಅಬ್ಬರಿಸಿದ್ದಾರೆ‌. ಇದರ ಜೊತೆಗೆ ತಮ್ಮದೇ ಶ್ರೀವಿದ್ಯಾ ಕ್ರಿಯೇಶನ್ಸ್ ಮೂಲಕ `ಲೋ ಬಜೆಟ್ ನೋ ಬಜೆಟ್` ಎಂಬ ಕಾಮಿಡಿ ಜಾನರ್ ಚಿತ್ರವನ್ನೂ ನಿರ್ಮಾಣ ಮಾಡುತ್ತಿದ್ದಾರೆ. 
 
ವಿ.ಕುಮಾರ್ ಅವರ ನಿರ್ದೇಶನದ ಪ್ರೀತಿಯ ಹುಚ್ಚ ಕನ್ನಡ ಹಾಗೂ ತಮಿಳು ಸೇರಿ 2 ಭಾಷೆಗಳಲ್ಲಿ  ನಿರ್ಮಾಣವಾಗಿದ್ದು, ಬೆಂಗಳೂರು. ಮಂಡ್ಯ, ಚಿಕ್ಕಮಗಳೂರು, ಹಾಸನ, ಶ್ರವಣಬೆಳಗೊಳ ಹಾಗೂ ಮುಂಬೈನ ಕಾಮಾಟಿಪುರದಲ್ಲಿ 65ದಿನಗಳವರೆಗೆ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.  ಜೆ.ಎನ್. ರಂಗರಾಜನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸುನಿಲ್ ಕೆ.ಆರ್‌.ಎಸ್. ಅವರ ಛಾಯಾಗ್ರಹಣ, ಪ್ರವೀಣ್ ವಿಷ್ಣು ಅವರ ಸಂಕಲನ ಈ ಚಿತ್ರಕ್ಕಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed